KN/Prabhupada 1061 - ಭಗವದ್ಗೀತೆಯ ವಸ್ತು 5 ಮೂಲ ಸತ್ಯಗಳು
660219-20 - Lecture BG Introduction - New York
ಯದಾ ಯದಾ ಹಿ ಧರ್ಮಸ್ಯ ಗ್ಲಾನೀರ್ ಭವತಿ (ಭ.ಗೀ 4.7) ಶ್ರೀ ಕೃಷ್ಣ ಜೀವನದ ನಿಜವಾದ ಉದ್ದೇಶವನ್ನು ಸ್ಥಾಪಿಸಲು ಬರುತ್ತಾನೆ. ಯಾವಾಗ ಮನುಷ್ಯನು ಜೀವನದ ನಿಜವಾದ ಉದ್ದೇಶವನ್ನು, ಮನುಷ್ಯ ಜನ್ಮದ ಗುರಿಯನ್ನು, ಮರೆಯುತ್ತಾನೋ ಆಗ ಅದು, ಧರ್ಮಸ್ಯ ಗ್ಲಾನಿ, ಮಾನವ ವೃತ್ತಿಯ ಅಡಚಣೆ ಎನಿಸುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ, ಅಸಂಖ್ಯಾತ ಮನುಷ್ಯರಲ್ಲಿ ಯಾರೊಬ್ಜ ತನ್ನ ಸಹಜಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸ್ಥಿತಿಗೆ ಜಾಗೃತನಾಗುತ್ತಾನೋ ಅವನಿಗಾಗಿ ಭಗವದ್ಗೀತೆ ಹೇಳಿರುವುದು. ನಮ್ಮನ್ನೆಲ್ಲಾ ಅಜ್ಞಾನದ ಸಿಂಹಿಣಿ ನುಂಗಿಹಾಕಿದ್ದಾಳೆ. ಭಗವಂತ ಜೀವಿಗಳ ಮೇಲೆ, ವಿಶೇಷವಾಗಿ ಮನುಷ್ಯರ ಮೇಲೆ, ಅಪಾರ ಕರುಣೆ ತೋರಿ ಅವನ ಗೆಳೆಯ ಅರ್ಜುನನನ್ನು ವಿದ್ಯಾರ್ಥಿಯನ್ನಾಗಿ ಮಾಡಿಕೊಂಡು ಭಗವದ್ಗೀತೆಯನ್ನು ಭೋದಿಸಿದನು.
ಶ್ರೀ ಕೃಷ್ಣನ ಸಂಗಾತಿಯಾಗಿ ಅರ್ಜುನನು ಎಲ್ಲಾ ಅಜ್ಞಾನವನ್ನು ಮೀರಿದವನು. ಆದರೂ ಕುರಕುಕ್ಷೇತ್ರ ರಣಭೂಮಿಯಲಿ ಅರ್ಜುನನನ್ನು ಅಜ್ಞಾನದಲ್ಲಿ ಇರಿಸಲಾಯಿತು. ಬದುಕಿನ ಸಮಸ್ಯೆಗಳನ್ನು ಕುರಿತು ಅರ್ಜುನನು ಪರಮ ಪ್ರಭುವನ್ನು ಪ್ರಶ್ನಿಸುವುದೇ ಇದರ ಉದ್ದೇಶವಾಗಿತ್ತು. ಇದು ಏಕೆಂದರೆ, ಶ್ರೀ ಕೃಷ್ಣನು ಈ ವಿಷಯಗಳ ಬಗ್ಗೆ ವಿವರಿಸಿ, ಮುಂದಿನ ಪೀಳಿಗೆಗಳ ಒಳಿತಿಗಾಗಿ, ಅವರ ಬದುಕಿನ ಯೋಜನೆಯನ್ನು ರೂಪಿಸಿಕೊಂಡು, ತಮ್ಮ ಜೀವನದ ಉದ್ದೇಶವನ್ನು ಅರಿತು ಪರಿಪೂರ್ಣರಾಗುವ ರೀತಿಯಲ್ಲಿ ನಡೆಯುವುದು.
ಆದ್ದರಿಂದ, ಭಗವದ್ಗೀತೆಯ ವಸ್ತುವಿಷಯವೆಂದರೆ 5 ವಿಭಿನ್ನ ಸತ್ಯಗಳನ್ನು ಅರಿಯುವುದು. ಮೊದಲನೆಯದಾಗಿ ದೇವರು ಎಂದರೇನು? ಇದು ಭಗವದ್ ವಿಜ್ಞಾನದ ಪ್ರಾಥಮಿಕ ಅಧ್ಯಯನ. ಭಗವದ್ ವಿಜ್ಞಾನವನ್ನು ಇಲ್ಲಿ ವಿವರಿಸಿದ್ದಾರೆ. ನಂತರ ಜೀವಿಗಳ ಸಹಜ ಸ್ವರೂಪ, ಜೀವ. ಈಶ್ವರ ಮತ್ತು ಜೀವ. ಪರಮ ಪುರುಷನನ್ನು ಈಶ್ವರ ಎನ್ನುತ್ತಾರೆ. ಈಶ್ವರ ಎಂದರೆ ನಿಯಂತ್ರಕ. ಮತ್ತು ಜೀವಿಗಳು ನಿಯಂತ್ರಕರಲ್ಲ, ನಿಯಂತ್ರಿಸಲ್ಪಡುವವರು. ಕೃತಕವಾಗಿ, "ನಾನು ನಿಯಂತ್ರಿಸಲ್ಪಡುವುದಿಲ್ಲ, ನಾನು ಸ್ವತಂತ್ರ" ಎನ್ನಬಹುದು, ಆದರೆ ಅದು ವಿವೇಕವಂತನು ಹೇಳುವ ಮಾತಲ್ಲ. ಜೀವಿಯು ಪ್ರತಿ ವಿಷಯದಲ್ಲೂ ನಿಯಂತ್ರಿಸಲ್ಪಡುತ್ತಾನೆ. ಕನಿಷ್ಠವಾಗಿ, ಅವನ ಬದ್ಧ ಸ್ಥಿತಿಯಲ್ಲಿ ನಿಯಂತ್ರಿಸಲ್ಪಡುತ್ತಾನೆ. ಭಗವದ್ಗೀತೆಯಲ್ಲಿ ಪರಮ ನಿಯಂತ್ರಕ (ಈಶ್ವರ) ಹಾಗೂ ನಿಯಂತ್ರಿಸಲ್ಪಡುವ ಜೀವಿಗಳು, ಮತ್ತು ಪ್ರಕೃತಿ (ಭೌತಿಕ ಪ್ರಕೃತಿಯ) ವಿಷಯಗಳಿವೆ. ತದನಂತರ, ಕಾಲ, ಇಡೀ ವಿಶ್ವದ ಅಸ್ತಿತ್ವದ, ಅಥವಾ ಈ ಐಹಿಕ ನಿಸರ್ಗದ ಕಾಲಾವಧಿ, ಮತ್ತು ಶಾಶ್ವತದ ಕಾಲ. ಕೊನೆಯದಾಗಿ ಕರ್ಮ, ಕರ್ಮ ಎಂದರೆ ಚಟುವಟಿಕೆ. ಇಡೀ ವಿಶ್ವವು ಬೇರೆ ಬೇರೆ ಚಟುವಟಿಕೆಗಳಿಂದ ತುಂಬಿದೆ. ಜೀವಿಗಳೆಲ್ಲ ವಿಭಿನ್ನ ಚಟುವಟಿಕೆಯಲ್ಲಿ ಮಗ್ನರಾಗಿದ್ದಾರೆ. ನಾವು ಭಗವದ್ಗೀತೆಯಿಂದ ಈಶ್ವರ (ದೇವರು) ಎಂದರೇನು, ಜೀವಿಗಳು ಎಂದರೇನು, ಮತ್ತು ಪ್ರಕೃತಿ, ವಿಶ್ವ ಸೃಷ್ಟಿ ಎಂದರೇನು, ಹೇಗೆ ಕಾಲದಿಂದ ಎಲ್ಲಾ ನಿಯಂತೃತವಾಗುತ್ತಿದೆ, ಹಾಗೂ ಕರ್ಮಗಳೆಂದರೇನು ಎಂದು ಅಧ್ಯಯಿಸುತ್ತೇವೆ.
ಈಗ ಈ 5 ವಿಷಯ ವಸ್ತುಗಳಲ್ಲಿ, ಪರಮ ಪುರುಷ, ಈಶ್ವರ, ಕೃಷ್ಣ, ಬ್ರಹ್ಮ, ಪರಮಾತ್ಮ, ನಾವು ಹೇಗಾದರೂ ಕರೆಯಬಹುದು, ಅವನು ಪರಮ ನಿಯಂತ್ರಕನಿದ್ದಾನೆ. ಈ ಪರಮ ನಿಯಂತ್ರಕನು ಎಲ್ಲರಿಗಿಂತ ಸರ್ವೋತ್ತಮನು. ಜೀವಿಗಳು ಗುಣಾತ್ಮಕವಾಗಿ ಪರಮ ನಿಯಂತ್ರಕನಂತಿದ್ದಾರೆ. ಪರಮ ನಿಯಂತ್ರಕ, ಭಗವಂತನಿಗೆ ಐಹಿಕ ನಿಸರ್ಗದ ಎಲ್ಲಾ ಕ್ರಿಯೆಗಳ ಮೇಲೆ ನಿಯಂತ್ರಣವಿದೆ. ಪ್ರಕೃತಿಯು ಸ್ವತಂತ್ರವಲ್ಲ ಎಂಬುದನ್ನು ಭಗವದ್ಗೀತೆಯ ನಂತರ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಪ್ರಕೃತಿ ಭಗವಂತನ ನಿರ್ದೇಶನದ ಹಾಗೆ ನಡೆಯುತ್ತಾಳೆ. ಮಯಾಧ್ಯಕ್ಷೇಣ ಪ್ರಕೃತಿ ಸೂಯತೇ ಸ ಚರಾಚರಂ (ಭ.ಗೀ 9.10). "ಈ ಐಹಿಕ ಪ್ರಕೃತಿಯು ನನ್ನ ನಿರ್ದೇಶನದಲ್ಲಿ ಕಾರ್ಯ ನಿರ್ವಹಿಸುತ್ತಿದೆ", ಮಯಾಧ್ಯಕ್ಷೇಣ, "ನನ್ನ ಅಧ್ಯಕ್ಷತೆಯಲ್ಲಿ."
- 1080 Kannada Pages with Videos
- Prabhupada 1061 - in all Languages
- KN-Quotes - 1966
- KN-Quotes - Lectures, Bhagavad-gita As It Is
- KN-Quotes - in USA
- KN-Quotes - in USA, New York
- KN-Quotes - Introduction to Bhagavad-gita As It Is
- Introduction to Bhagavad-gita As It Is in all Languages
- Kannada Language
- Pages with broken file links